Sunday, October 5, 2008

Mohini Manavana Kathe

ಮೋಹಿನೀ ಮಾನವನ ಮೋಹದಾ ಕಥೆ ಕೇಳಿ,
ಪ್ರೆತದೊಡನೆ ನನಗೆ ಪ್ರೀತಿ ಮೂಡಿತ್ತು.
ಹಿಂದೆಂದು ಯಾರು ಕಂಡು ಕೇಳಿಲ್ಲದಾ,
ಇಹದ ಪರ ಲೋಕದಾ ಅಮರ ಗಾಥಾ.

ಮಸಣದಾ ಮಧ್ಯದಲಿ ನಡೆದು ಸಾಗುತಲಿದ್ದೆ,
ಅಷ್ಟರಲಿ ಬಂದಳಾ ಪ್ರಾಣಕಾಂತೆ.
ಕಾಲ್ಗಳು ಹಿಂದಿರುಗಿ ಕಣ್ಣುಗಳು ಕೆಂಪಾಗಿ,
ಪ್ರಣವಾ ತೆಗೆವಂತ ಭೂತಮಾತೆ.

"ಹಿಡಿದ ಕೈಗಳ ಬಿಡೆನು, ಮದುವೆಯಾಗಲಿ ಬೇಕು
ಇಲ್ಲದಿರಲು ರಕ್ತ ಹೀರಿಬಿಡುವೆ",
ಬೆತಾಳದಾ ಭಯಕೆ ಬಾಗಲೇ ಬೇಕಾಯ್ತು ,
ಪ್ರಾಣಕ್ಕೆ ಅಂಜಿಯೂ ಬಲಿಗೆ ಇರುವೆ.

ಮದುವೆಯಾ ಔತಣದಿ ರಕ್ತದಾ ಬೋಗೋಣಿ,
ರುಂಡ ಮುಂಡಗಳಿಲ್ಲಿ ಲಾಡು ಉಂಡೆ.
ನೀರಿನಲಿ ಕಲೆತಿರುವ ಬೂದಿಯೇ ಚಟ್ಟಣಿಯು,
ಚಪ್ಪರಿಸಲು ಲಕ್ಷ ಪ್ರೇತಭಾಂದವರು.

ಭೂತದೀ ಲೋಕದಲಿ ದೇಹಕ್ಕೆ ಬೆಲಇಲ್ಲ,
ಆತುಮದ ಮೌಲ್ಯವಾ ಅರೆತಿಹರು ಎಲ್ಲಾ.
ಉಸಿರಿಲ್ಲದಿದ್ದರೂ ಹಸಿರಿವುಗಳಾಮನವು,
ಮಾನವನ ಲೋಕ ಹೀಗಿಲ್ಲವಲ್ಲಾ...

No comments: