Monday, October 13, 2008

The Original Nayi Mari...

ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು! ತೀರ್ಥ ಬೇಕು! ಎಲ್ಲ ಬೇಕು!
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ಕಳ್ಳ ಬ್ಬಂದರೇನು ಮಾಡುವೆ?
ಲಾಲ್, ಲಾಲ್, ಭೌ . ಭೌ ಎಂದು ಕೂಗಿಯಾಡುವೆ.
ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು.

Thursday, October 9, 2008

Nayi Mari, Nayi Mari


ನಾಯಿ ಮರಿ ನಾಯಿ ಮರಿ,ತಿಂಡಿ ಬೇಕೇ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.
ನಾಯಿ ಮರಿ ತಿಂಡಿ ನಿನಗೆ ಏಕೇ ಬೇಕು?
ನೀರಕುಡಿದು ಕಾಲನೆತ್ತಿ ಖಂಬ ತೊಳೆಯಲು.

ನಾಯಿ ಮರಿ ಖಂಬವನ್ನು ಏಕೆ ತೊಳೆಯುವೆ?
ಹಿಂದೆಬರುವ ಹೆಣ್ಣು ನಾಯಿ ಒಲಿಸಿಕೊಳ್ಳಲು.
ನಾಯಿ ಮರಿ ಹೆಣ್ಣು ನಾಯಿ ಏಕೇ ಒಲಿಸುವೆ?
ಮತ್ತೆ ನೀನು ನಾಯಿ ಮರಿಯ ಹಾಡು ಹಾಡಲು.

ಎಷ್ಟು ನಾಯಿ ಮರಿಗಳನ್ನು ಹುಟ್ಟುಹಾಕುವೆ?
ಎಷ್ಟು ಖಂಬ ತೊಳೆಯುವೇನೋ ಅಷ್ಟು ಮರಿಗಳು.
ಅಷ್ಟು ನಾಯಿ ಮರಿಗಳಿಂದ ಏನು ಮಾಡುವೆ?
ತಂಡ ಕಟ್ಟಿ ಚಂಡ ಹಾಕಿ ಆಟ ಆಡುವೆ.

ಆಡುವಾಗ ಕಡ್ಡಿ ಮುರಿದರೇನು ಮಾಡುವೆ?
ಕಡ್ಡಿ ಮುರಿದ ಬಡ್ಡಿ ಮಗನ ಚಡ್ಡಿ ಹರಿಯುವೆ.
ಅಷ್ಟು ಕ್ರೂರಿ ಆಗ ಬೇಡ ತಾಳ್ಮೆ ತೆಗೆದುಕೋ
ತಿಂಡಿ ಹಾಕಿ ಸಾಹುಕಾರ ಚಡ್ಡಿ ಉಳಿಸಿಕೋ.

Sunday, October 5, 2008

ಕಾಮೆಂಟ್ ಪ್ಲೀಸ್

ಯಾಕ್ರೀ? "comment" ಹೊಡಿಯಕ್ಕೆ ಭಯನಾ? ನಂಗೆ ಬೇಜಾರ್ ಆದ್ರೇ ಅಂತ ಸಂಕೊಚನಾ? ಪರವಾಗಿಲ್ಲ ಹೇಳಿ. ಇಷ್ಟುಕಷ್ಟಾಪಟ್ಕೊಂಡು ಯಾರ್ಗೂ ಸಿಗದೆಯಿರೋ ಸೈಟ್ನ ಹುಡಕ್ಕೊಂಡ್ ಬಂದಿರೋ ಶ್ರಮಕ್ಕಾದ್ರೂ ಬೆಲೆಕೊಟ್ಟು ಏನಾದ್ರು ಬರದ್ ಹೋಗಿ.
ನಿಜ "comment" ಇಂದ ಸಧ್ಯದಲ್ಲಿ ನಿಮಗೇನೂ ಲಾಭ ಇಲ್ಲ, ಆದರೂ, ನಾನು ಬಿಡ್ತೀನಾ? ಮತ್ತೆ ಮತ್ತೆ ನಿಮಗೆ ಓದಕ್ಕೆ ಬಲವಂತಮಾಡ್ತೀನಿ. ನೀವೋ, ಆದರ್ಶ ಭಾರತೀಯರು, ಯಾರಾದ್ರು ಏನಾದ್ರು ಕೆಳದ್ರೆ, ಇಲ್ಲ ಅಂತ ಹೇಗ್ ಹೇಳ್ತಿರ ಪಾಪ. ಮತ್ತೆ ಅದೇತರಹದ ಬ್ಲಾಗ್ ಓದಿ ಸಂಕ್ಟ ಪಡ್ತೀರ. ಯಾಕಪ್ಪಾ ತೊಂದ್ರೆ? ಹೇಳಿ, ನಿಮ್ಮ ಇಷ್ಟಾ ಕಷ್ಟಗಳನ. ಮುಂದಿನ ಪೋಸ್ಟ್ಗಳಾದ್ರೂ ಬಲವಂತಕ್ಕೆ ಓದೋಹಂಗೆ ಇರದಂತೆ ಪ್ರಯತ್ನಿಸ್ತೀನಿ. ನೋಡಿ, ನಿಮ್ಮಿಷ್ಟ, ಇಲ್ಲಪ್ಪ ಜೀವನ ತುಂಬಾ ಚೆನ್ನಾಗಿದೆ, ದೃಷ್ಟಿ ಚುಕ್ಕೆತರ ನೀನು,ನಿನ್ನ ಲೇಖನಗಳು ಇರ್ಬೇಕು ಅಂತ ನಿರ್ಧರಿಸಿದ್ರೇ ಹಾಗೆ ಸರಿ. ಸಿರಿಗನ್ನಡಂ ಗೆಲ್ಗೆ.

Mohini Manavana Kathe

ಮೋಹಿನೀ ಮಾನವನ ಮೋಹದಾ ಕಥೆ ಕೇಳಿ,
ಪ್ರೆತದೊಡನೆ ನನಗೆ ಪ್ರೀತಿ ಮೂಡಿತ್ತು.
ಹಿಂದೆಂದು ಯಾರು ಕಂಡು ಕೇಳಿಲ್ಲದಾ,
ಇಹದ ಪರ ಲೋಕದಾ ಅಮರ ಗಾಥಾ.

ಮಸಣದಾ ಮಧ್ಯದಲಿ ನಡೆದು ಸಾಗುತಲಿದ್ದೆ,
ಅಷ್ಟರಲಿ ಬಂದಳಾ ಪ್ರಾಣಕಾಂತೆ.
ಕಾಲ್ಗಳು ಹಿಂದಿರುಗಿ ಕಣ್ಣುಗಳು ಕೆಂಪಾಗಿ,
ಪ್ರಣವಾ ತೆಗೆವಂತ ಭೂತಮಾತೆ.

"ಹಿಡಿದ ಕೈಗಳ ಬಿಡೆನು, ಮದುವೆಯಾಗಲಿ ಬೇಕು
ಇಲ್ಲದಿರಲು ರಕ್ತ ಹೀರಿಬಿಡುವೆ",
ಬೆತಾಳದಾ ಭಯಕೆ ಬಾಗಲೇ ಬೇಕಾಯ್ತು ,
ಪ್ರಾಣಕ್ಕೆ ಅಂಜಿಯೂ ಬಲಿಗೆ ಇರುವೆ.

ಮದುವೆಯಾ ಔತಣದಿ ರಕ್ತದಾ ಬೋಗೋಣಿ,
ರುಂಡ ಮುಂಡಗಳಿಲ್ಲಿ ಲಾಡು ಉಂಡೆ.
ನೀರಿನಲಿ ಕಲೆತಿರುವ ಬೂದಿಯೇ ಚಟ್ಟಣಿಯು,
ಚಪ್ಪರಿಸಲು ಲಕ್ಷ ಪ್ರೇತಭಾಂದವರು.

ಭೂತದೀ ಲೋಕದಲಿ ದೇಹಕ್ಕೆ ಬೆಲಇಲ್ಲ,
ಆತುಮದ ಮೌಲ್ಯವಾ ಅರೆತಿಹರು ಎಲ್ಲಾ.
ಉಸಿರಿಲ್ಲದಿದ್ದರೂ ಹಸಿರಿವುಗಳಾಮನವು,
ಮಾನವನ ಲೋಕ ಹೀಗಿಲ್ಲವಲ್ಲಾ...

ದೇಶವೆನಾದೀತು?

ದೇಶವೆನಾದೀತು ಬರಿ ಗಡಿ ಗೀಟುಗಳನು ಗೀಚುತಿರಲು,
ಸಂಗೀತದ ಶ್ರುತಿಗಳನು ಬಂದೂಕು ಮೀಟುತಿರಲು.
ಮುಗ್ದ ಮನಸುಗಳಲಿ, ರಕ್ತ ಮಾಂಸದ ಹಚ್ಚೆ,
ಹೆಚ್ಚಾಗಿ ಕಾದಿದ್ದ ಮಚ್ಚಿಂದ ಕೊಚ್ಚಿರಲು.
ರಕ್ತದ ಹೊಳೆ, ಕಣ್ಣೀರಿನ ಮಳೆ
ಎಲ್ಲೆಲ್ಲು ಸುರಿದು ಹರಿಯುತಿಹುದು.
ಇದು ದೇಶದ ದೋಷವೋ? ದೋಷಮಯ ದೇಶವೋ?
ಪೆದ್ದುಗುಂಡನ ಮನ ಕೊರಗುತಿಹುದು.

Friday, October 3, 2008

Yeh Kaun Chitrakaar Hain

हरी भरी वसुंधरा पे नीला नीला ये गगन
के किस्के बादलों की पालकी उड़ा रहा पवन
दिशाएँ देखो रंगभरी, चमक रही उमंग भरी
ये किस ने फूल फूल पे किया सिंगार है
ये कौन चित्रकार है, ये कौन चित्रकार
ये कौन चित्रकार है.. ..

तपस्वीयों सी हैं अटल ये परवातों की चोटियाँ
ये सर्प सी घूमेरादार, घेरदार घाटीयाँ
ध्वजा से ये खड़े हुए हैं व्रिक्श देवदार के
गलीचे ये गुलाब के, बगीचे ये बहार के
ये किस कवी की कल्पना का चमत्कार है
ये कौन चित्रकार है.. ..

कुदरत की इस पवित्रता को तुम निहार लो
इस के गुणों को अपने मन में तुम उतार लो
चमकालो आज लालिमा, अपने ललाट की
कण कण से जातकी तुम्हे, छबी विराट की
अपनी तो आँख एक है, उस की हजार है
ये कौन चित्रकार है॥ ..

ಏನ್ ಹಾಡಲ್ವಾ ?
ಲೌಟ ಕೆ ಆಜಾ ಮೇರೆ ಮೀತ್ , ಆಧಾ ಹೈ ಚಂದ್ರಮಾ ರಾತ್ ಆಧೀ, ಮಾಲಿಕ್ ತೆರೆ ಬಂದೆ ಹಂ ಅಂಥಾ ಮಧುರವಾದ ಗೀತೆಗಳನ್ನು ಬರೆದ ಭಾರತ್ ವ್ಯಾಸರ ಮತ್ತೊಂದು ಅತ್ತ್ಯುತ್ತಮ ರಚನೆ ಇದು. ಇಂಥಾ ರಚನೆ ಜೊತೆಗೆ ಮುಕೇಶ್ ದ್ವನಿ ಸೇರದ್ರೆ ಕೇಳ್ಬೇಕಾ? ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ .ಎಂಥಾ ಶುದ್ಧ ಭಾಷಾ ಪ್ರಯೋಗ ಗಮನಿಸಿದ್ರಾ? ವಸುಂಧರೆ, ತಪಸ್ವಿ, ಅಟಲ್ , ಲಲಾಟ , ವಾಹ್ ನಿಜವಾಗಲು ರೊಮಾಂಚನಗೊಳಿಸುತ್ತೆ ಕೇಳ್ತಾಯಿದ್ದ್ರೆ. ಇಷ್ಟು ಚೆನ್ನಾಗಿ ಪ್ರಕೃತೀನ ಅನುಭವಿಸೋ ಭಾಗ್ಯ ಎಲ್ಲರಿಗೂ ಸಿಗೋಲ್ಲ. ಕಲ್ಪನೆ ಕೂಡ ಭಿನ್ನವಾಗಿದೆ. ಎಲ್ಲಿಲ್ಲದ ಧೃಡತೆ . ಆಶಾವಾದ ಉಕ್ಕಿ ಹರಿತಾಯಿದೆ. ಶಾಲೆ ಮಕ್ಕಳಿಗೆ ಪ್ರಕೃತಿಯ ಸೊಬಗನ್ನು ವರ್ಣಿಸೋ ಸನ್ನಿವೇಶವಾಗಿ ಚಿತ್ರೀಕರಿಸಿದ್ದಾರೆ. ಸೌಂದರ್ಯವರ್ಣನೆಯ ಜೊತೆಗೆ ಕೃತಜ್ಞತೆ ಸಲ್ಲಿಸೋದು,ಕಾಪಾಡಿಕೊಳ್ಳುವ ಜವಾಬ್ದಾರಿಯ ಅರಿವು ಮೂಡಿಸೋದ್ರಲ್ಲೂ ಸಪಲರಾಗಿದ್ದಾರೆ. ಒಟ್ಟಿನಲ್ಲಿ ಮೈ ಮರೆಸುವ ಹಾಡು, ಕೆಳ್ದಾಗ್ಲೆಲ್ಲಾ ಓಡಿಹೋಗಿ ನಿಸರ್ಗದ ಮಡಿಲು ಸೇರುವ ಹಂಬಲ ಮೂಡಿಸುತ್ತೆ. ನೀವೂ ಕೇಳಿ ಆನಂದಿಸಿ.


Mussanje



ಕೆಂಡ ಕೆಂಪಿನ ಸೂರ್ಯ ತಂಪನ್ನು ಸೂಸುತಲಿ,
ಮಂಡೆಯಾ ಮಟ್ಟಕ್ಕೆ ಬಂದು ನಿಂತಿಹನು.
ಚಂದದಾ ಚಂದುಳ್ಳಿ ಸಂಜೆಯಾ ರಾಣಿಯು,
ಮನಸೋತ ಮೈಗಳ ಅಪ್ಪಿ ನಿಂತಿಹಳು.

ನೆತ್ತಿಯಾ ಸುಡುವವನೆ ನೆರಳನ್ನು ಹಾಸುವನು,
ಬಿಸಿಲಿನಾ ಬೆಂಕಿಯೇ ಜ್ಞಾನಜ್ಯೋತಿ.
ಕಾಣದ ಊರಿನ ಮರೆಯಾಚುವವನಾತ,
ನಾಳಿನಾ ಜನರಿಗೆ ದಾರಿದೀಪ.

ಹಣತೆಯಾ ಹಚ್ಚಲವ ಮನದಾನ್ತರಾಳದಲಿ
ನಿರುತವೂ ಕ್ಷೀಣದ ಗಗನ ತಾರೆ,
ತಲೆಬಾಗಿ ನಮಿಸುವನು ಪೆದ್ದುಗುಂಡನು ,
ಆಶದ ಕಿರಣವನು ಬೆಳಗಿದವಗೆ.

Thursday, October 2, 2008

ನಮಸ್ಕಾರ


ನನ್ನ ಮೊದಲನೆಯ ಬ್ಲಾಗ್ಗೆ ನಿಮ್ಮೆಲ್ಲರಿಗೂ ಸ್ವಾಗತ
ಹೊಸ ಪ್ರಯೋಗದಲ್ಲಿ ಯೆಡುವಿದರೆ, ಆಸೆರೆಗೆ ನಿಮ್ಮ ಕೈ
ಇರಲೆಂದು
ಕೋರುತ್ತೇನೆ.




ವೃತ್ತಿ ಇಂದ ಸದ್ಧ್ಯಕ್ಕೆ ನಿರುದ್ದ್ಯೂಗಿ, ಅಕ್ಕನ ಬಾಣಂತನಕ್ಕೆ ಅಲ್ಲಾರೀ ,ವಿಧ್ಯಾಭ್ಯಾಸ ಮುಂದುವರಿಸಲು ನಿವೃತ್ತಿ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಪಯಣ.

ಹೌದು, ಅಕ್ಕನಿಗೆ ಮಗು ಹುಟ್ಟಿದೆ, "ಗಂಡು ಗಲಿ", "ಕಾರಂಜಿ ಆಂಜನೇಯ ", ಕೆಲವೊಮ್ಮೆ "ಮುರಾರ್ಜಿ ದೆಸಾಯಿಯು" ಹೌದು.ತಿಂಗಳು ಕಳೆದು ಇವತ್ತಿಗೆ ಆರು ದಿನಗಳಾದವು. ೨೪ ವರ್ಷಗಳ ನನ್ನ ಅವಿರೂದೀ ಸ್ಥಾನವನ್ನು ಕಸಿದು ಕೊಂಡಿದ್ದಾನೆ. ಮನೆಯಲ್ಲಿ ಈಗ ಇವನೇ ಕಿರಿಯ. ಲಂಗ್ಗೊಟಿ ಬದಲಾದಷ್ಟೂ ಎಲ್ಲರಿಗೂ ಸಂಭ್ರಮ . ದುಂಡು ಪಾಪನಂತೆ , ನಂದಗೊಪನಂತೆ, ಆಹಾ ಅದೆಷ್ಟು ಮಂತ್ರ ಪುಷ್ಪಾವಳಿ. ಎಲ್ಲೆಡೆ ಹೊಸ ಚೈತನ್ಯ. ಡಿ.ವಿ.ಜಿ ಹೇಳ್ದಂತೆ, ಹೊಸ ಚಿಗುರು, ಹಳೆ ಬೇರು ಕೂಡಿದರೆ ಮರಸೊಬಗು. ಮರದ ಸೊಬಗು ಹೀಗೇ ಬೆಳೆಯಲಿ. ಹಸಿರೊಡೆದು ಉಸಿರು ತಂಪಾಗಲಿ. ಹೊತ್ತಕನಸಿನ ಹೊರೆಯ ಕಣವೊಂದು ನನಸಾಯ್ತು, ಮತ್ತಷ್ಟು ಹೊರುವಂತೆ ಕೃಪೆ ತೋರಲಿ, ದೇವ .