ಯಾವ ಪಥ ಸನ್ಮಾರ್ಗ? ಯಾವ ದುರ್ಮಾರ್ಗ ?
ಯಾವ ಮತಿ ಸನ್ಮತಿಯೊ? ಮತ್ತಾವ ದುರ್ಮತಿಯೋ ?
ಎಲ್ಲಿ ನಡೆದರೆ ವೊಳಿತೊ? ಎಲ್ಲಿ ಅಳಿವೊ ?
ಹಿಂದೊಂದು ಕಾಲಕ್ಕೆ ಇಂತೆಯೇ ಗೊಂದಲವು,
ಅಂದಿದ್ದ ಚೇತನವು ಇಂದೇಕೆ ಸ್ತಬ್ಧ?
ಆಗಿದ್ದ ವಿಷ್ವಾಸ ಈಗೇಕೆ ಹಿಂಗಿಹುದು ?
ಅತಿಯಾದ ಆ ಧೈರ್ಯ ಈಗೇಕೆ ಸುಪ್ತ ?
ಅರಿವು ತನದಲ್ಲ, ಹಿರಿಮೆ ತನದಲ್ಲ,
ಗರಿಬಿಚ್ಚಿ ಹಾರಿದಾಕಾಶ ತನದಲ್ಲ.
ಮರುಕ ತನದಲ್ಲ, ಕಿರಿಮೆ ತನದಲ್ಲ,
ಮುಳುಗುತಿಹ ಪಾತಾಳದಾಳ ತನದಲ್ಲ .
ಎಲ್ಲೆಲ್ಲು ವ್ಯಾಪ್ತ ಎಲ್ಲರಿಗೂ ಆಪ್ತ
ಬಲ್ಲವಗೆ ಭಯವಿಲ್ಲ ಪೆದ್ದು ಗುಂಡ .
No comments:
Post a Comment