Friday, October 26, 2012

ಕಣ್ಮುಚ್ಚಿ ತೆಗೆವಲ್ಲಿ ಕಾಲವೇ ಉರುಳಿಹುದು,
ಕಂಡದೆಲ್ಲ ಕಲ್ಪನೆಯ ರೂಪ.
ಆಸೆಗಳು ಎಷ್ಟೋ, ನೆರಾಸೆ ಇನ್ನೆಷ್ಟೋ ,
ಕೊನೆಗೆಲ್ಲ ಶೂನ್ಯದಲಿ ಏಕ.

ಮತ್ತೆ ಅದೇ ಸಾಲುಗಳು,
ಕಡಲ ತೆರೆಗರಿವುಂಟೇ  ನೀರ ಹನಿ ತೂಕ?
ಮಾಡಿರುವ ಕರ್ಮಗಳು ಹಿರಿದೇನು ಕಿರಿದೇನು?
ಕೊನೆಗೆಲ್ಲ ಶೂನ್ಯದಲಿ ಏಕ.

ನಿರ್ಯಾಣ ಘಟ್ಟದಲಿ ಜೊತೆಗೇನು ಒಯ್ಯುವುದು,
ಕ್ಷಣಮಾತ್ರ ಕೊಳ್ಳಲಾಗದ ಧನಿಕ?
ಹಿಡಿದಿಟ್ಟ ಉಸಿರೇ ನುಸುಳಿ ಮರೆಯಾಗುವುದು,
ಕೊನೆಗೆಲ್ಲ ಶೂನ್ಯದಲಿ ಏಕ.

No comments: