Saturday, December 4, 2010

Ramachar Adya Passes Away

ಕನ್ನಡ ಸಾಹಿತ್ಯದಲ್ಲಿ ನನಗೆ ಆಸಕ್ತಿ ಮೂಡಲು ಪ್ರಮುಖ ಕಾರಣಗಳಲ್ಲಿ ಒಂದು ನನ್ನ ತಾತ ಶ್ರೀ ರಾಮಾಚಾರ್ ಆದ್ಯ. ನನ್ನ ಮೊದ ಮೊದಲ ಕವನಗಳನ್ನು ಕೇಳೆ, ನಕ್ಕಿ ಹೊರದೂಡದೆ, ಪ್ರೋತ್ಸಾಹ ನೀಡಿದಕ್ಕೆ ನಾನು ಅವರಿಗೆ ಸದಾ ಚಿರಋಣಿ. ಅವರ ನಿರ್ಯಾಣ ಶಾಂತಿ ಹಾಗು ನೆಮ್ಮದಿಯಿಂದ ಕೂಡಿರಲಿಯಂದು ಮೂಲ ರಾಮನಲ್ಲಿ ಪ್ರಾರ್ಥಿಸುತ್ತೇನೆ.

Wednesday, November 17, 2010

Neenillade Nanagenide with lyrics




ನೀನಿಲ್ಲದೆ ನನಗೇನಿದೆ?
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ


ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವ್ವು ಹಗಲಿರುಳು ತಂದೆ ನೀನು
ಎದೆಯಾಸೆ ಏನೋ ಎಂದು ನೀಕಾಣದಾದೆ
ನಿಶೆಯೊಂದೆ ನನ್ನಲಿ ನೀ ತುಂಬಿದೆ 
ಬೆಳಕೊಂದೆ ನಿನ್ನಿಂದ ನಾ ಬಯಸಿದೆ


ವೋಲವೆಂಬ ಕಿರಣ ಬೀರಿ,ವೋಳಗಿರುವ ಬಣ್ಣ ತೆರೆಸಿ
ವಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ 
ಸೆರೆಯಿಂದ ಬಿಡಿಸಿನನ್ನ ಆತಂಕ ನೀಗು
ಹೊಸಜೀವ ನಿನ್ನಿಂದ ನಾತಾಳುವೆ
ಹೊಸಲೋಕ ನಿನ್ನಿಂದ ನಾಕಾಣುವೆ


ಸಾಹಿತ್ಯ - ಎಂ ಏನ್ ವ್ಯಾಸ ರಾವ್

Tuesday, September 7, 2010

Saavu

ಸಾವೆಂದರೆ ಏಕೆ ಅಂಜಿಕೆಯೋ ಗುಂಡಣ್ಣ
ಸಾವೆಂಬುವುದು ನಿನಗೆ ಹೊಸತೇನು ಅಲ್ಲ
ದಣಿದಿರುವ ದೇಹಕ್ಕೆ ಸಾವು ಸುಖದ ನಿದಿರೆ
ಹಳೆಯ ಆತುಮಕೆ ಹೊಸತೊಂದು ಹೊದಿಕೆ

ಪ್ರಾಣವದು
ಇರುವಾಗ ಸಾವಿನಾ ಚಿಂತೆ
ಹೋಗುತಿರಲಾಪ್ರಾಣ ಬದುಕುವ ಆಸೆ
ಇದ್ದರಿಲದಿದ್ದರೂ ಕೊರಗಿಗಿಲ್ಲವೋ ಕೊರತೆ
ಜೀವನದ ಮುಲ್ಯವ ಅರಿಯುವವರೆಗೆ

ಸತ್ತಮೆಲಿನ ಬದುಕು ಕಂಡವರು ಯಾರಿಲ್ಲ
ಕೇಳಿರುವ ಮಾತು ನಿಜವೇ ಎಲ್ಲಾ ?
ಪಾಪ ಪುಣ್ಯಗಳೆರಡು ಎಲ್ಲಿ ಕರೆದೊಯ್ಯುವವೋ?
ಸತ್ತಮೇಲೇ ತಿಳಿವೆ ಪೆದ್ದು ಗುಂಡ


Sunday, August 29, 2010

Mithya

ಇರುಳು ಹಗಲಿನ ಅಂತ್ಯ
ಹಗಲು ಇರುಳಿನ ಅಂತ್ಯ
ಸ್ಥಿತ ಸ್ಥಿತಿಯ ಅಸ್ಥಿತ್ಯ
ಬರಿ ಮಿಥ್ಯ , ಬರಿ ಮಿಥ್ಯ

ಶತ ಶಪತಗಳ ವಾಕ್ಯ
ಕನಸಿನ ಗರ್ಭದ ಚೈತ್ಯ
ಪ್ರೀತಿ ಮಿತಿ ದಿಗಂತ್ಯ
ಬರಿ ಮಿಥ್ಯ , ಬರಿ ಮಿಥ್ಯ

"ನೀನ್" ಅರಿತ "ನಾನ್" ಮಿಥ್ಯ
"ನಾನ್" ಅರಿತ "ನೀನ್" ಮಿಥ್ಯ
ಭಾವಗಳ ಭಾವೈಕ್ಯ
ಬರಿ ಮಿಥ್ಯ,ಬರಿ ಮಿಥ್ಯ

Monday, July 26, 2010

PraLaya

ನೀಲಿ ಆಕಾಶವು ರಕ್ತದ ಕಡಲಾಗಿ
ಬಾನಿನ ಛಾವಣಿ ಬಾಣದಿ ಛದುರಿ
ಊರು ಕೇರಿಗಳೆಲ್ಲ ಕಾಣದೆ ಮರೆಯಾಗಿ
ಮಾಡಿದಿಹವು ಶಿವನ ತಾಪದಿಂದಾಗಿ

ನಟರಾಜನಾ ನಾಟ್ಯ ನಡುಕವ ತಂದಿಹುದು
ಢಮರುವ ಢಮರುಗದಿ ದಂಗೆ ಹಬ್ಬಿಹುದು
ಮಿರಿದಂಗದಿ ಮರುಕ ಮೂಡಿಹುದು ಧರೆಯಲ್ಲಿ
ಕಬಳಿಸಿದೆ ದಹನವು ಧರೆಯನಿಂದು

ಇದುವೇ ಅಂತ್ಯದ ಆದಿ
ಇದುವೇ ನಾಶದ ನಾಂದಿ
ಇಲ್ಲಿಂದ ಮುಂದಿನ್ನು ನರಕ ಯಾತ
ನೋಡಲು ನಾನಿರೆನು ಲಯ ಕರ್ತನಾ ನಾಟ್ಯ
ಮುಂದೆ ಕೆಳುವುದೆಲ್ಲ ಪ್ರಳಯ ಗಾಥಾ

Wednesday, July 21, 2010

English Movies

ಕಳೆದ ಒಂದು ತಿಂಗಳಲ್ಲಿ ನಾನು ನೋಡಿರೋ English ಚಿತ್ರಗಳ ಪಟ್ಟಿ
Munich
American History X
Patriot
Brave Heart
Primal Fear
Green Street Hulligans
Bondock Saints
Apocalypto
Fight Club
Vantage Point
Bruce Almighty
Gladiator
Robinhood
Broken Arrow
Goal
Body of Lies
Blood Diamond

Sunday, July 11, 2010

Tanuvu Ninnadu Manavu Ninnadu

ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಘನವು ನಿನ್ನದು
ನಾನು ನಿನ್ನವನೆಂಬೋ ಹೆಮ್ಮೆಯ
ಋಣವು ಮಾತ್ರವೇ ನನ್ನದು

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾ ಮೋಹಶಕ್ತಿಯು
ನನ್ನ ಜೀವನ ಮುಕ್ತಿಯು


anantaswamiya dhwaniyalli

Saturday, July 10, 2010

O Nanna Chetana

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಮೈಸೂರು ಅನಂತಸ್ವಾಮಿ ಅವರ ಧ್ವನಿಯಲ್ಲಿ ಈ ಹಾಡು ಕೇಳಿ Youtube Link

Saturday, March 13, 2010

Dharma Yoddha

ಸ್ವರ್ಗದ ದಾಹವು ಧರೆಯ ನುಂಗುತಲಿಹುದು,
ನನ್ನೊಡೆಯ ನಿನ್ನೊಡೆಯನಿಗಿನ್ತಲು ಹೆಚ್ಚು.
ನಾ ನಂಬಿದ ದೇವ, ನನಗಿತ್ತ ಕಿವಿ ಮಾತು,
ನೆತ್ತರಿನ ಹೊಳೆದಾಟಿ ದಡಸೇರೆ ಸ್ವರ್ಗ.

ಧರ್ಮವನು ರಕ್ಷಿಸಿದೆ, ಧರ್ಮವೇ ರಕ್ಷಿಪುದು,
ನನಗಿಲ್ಲ ಖರ್ಮದ ಪ್ರತಿಫಲದ ಚಿಂತೆ.
ನೀನಿರಲು ನಿನ್ನೋಡೆಯ, ಇರಲಿಕ್ಕೆ ಯಾರಿಹನು?
ಯನ್ನಿಹಪರದ ಅದಿಪತಿಯ, ಆಪ್ತ ನಾನಾಗ.

ರಣಹೊಮದಾಹುತಿಗೆ ಸತ್ತಾಯ್ತು ಪರಧರ್ಮ,
ಸ್ವರ್ಗವೆಕೋ ಇನ್ನು ಕಾಣುವಂತಿಲ್ಲ.
ಮತಿಗೆಟ್ಟಿ, ಮಿತಿಮೀರಿ, ಮಾಡಿರುವ ದುಷ್ಖರ್ಮ,
ಬೆಮ್ಬಿಡುವುದೇ? ಸರಿಯೇ? ನಾನರಿತ ಧರ್ಮ?