Tuesday, September 7, 2010

Saavu

ಸಾವೆಂದರೆ ಏಕೆ ಅಂಜಿಕೆಯೋ ಗುಂಡಣ್ಣ
ಸಾವೆಂಬುವುದು ನಿನಗೆ ಹೊಸತೇನು ಅಲ್ಲ
ದಣಿದಿರುವ ದೇಹಕ್ಕೆ ಸಾವು ಸುಖದ ನಿದಿರೆ
ಹಳೆಯ ಆತುಮಕೆ ಹೊಸತೊಂದು ಹೊದಿಕೆ

ಪ್ರಾಣವದು
ಇರುವಾಗ ಸಾವಿನಾ ಚಿಂತೆ
ಹೋಗುತಿರಲಾಪ್ರಾಣ ಬದುಕುವ ಆಸೆ
ಇದ್ದರಿಲದಿದ್ದರೂ ಕೊರಗಿಗಿಲ್ಲವೋ ಕೊರತೆ
ಜೀವನದ ಮುಲ್ಯವ ಅರಿಯುವವರೆಗೆ

ಸತ್ತಮೆಲಿನ ಬದುಕು ಕಂಡವರು ಯಾರಿಲ್ಲ
ಕೇಳಿರುವ ಮಾತು ನಿಜವೇ ಎಲ್ಲಾ ?
ಪಾಪ ಪುಣ್ಯಗಳೆರಡು ಎಲ್ಲಿ ಕರೆದೊಯ್ಯುವವೋ?
ಸತ್ತಮೇಲೇ ತಿಳಿವೆ ಪೆದ್ದು ಗುಂಡ


No comments: