ನೀಲಿ ಆಕಾಶವು ರಕ್ತದ ಕಡಲಾಗಿ
ಬಾನಿನ ಛಾವಣಿ ಬಾಣದಿ ಛದುರಿ
ಊರು ಕೇರಿಗಳೆಲ್ಲ ಕಾಣದೆ ಮರೆಯಾಗಿ
ಮಾಡಿದಿಹವು ಶಿವನ ತಾಪದಿಂದಾಗಿ
ನಟರಾಜನಾ ನಾಟ್ಯ ನಡುಕವ ತಂದಿಹುದು
ಢಮರುವ ಢಮರುಗದಿ ದಂಗೆ ಹಬ್ಬಿಹುದು
ಮಿರಿದಂಗದಿ ಮರುಕ ಮೂಡಿಹುದು ಧರೆಯಲ್ಲಿ
ಕಬಳಿಸಿದೆ ದಹನವು ಧರೆಯನಿಂದು
ಇದುವೇ ಅಂತ್ಯದ ಆದಿ
ಇದುವೇ ನಾಶದ ನಾಂದಿ
ಇಲ್ಲಿಂದ ಮುಂದಿನ್ನು ನರಕ ಯಾತ
ನೋಡಲು ನಾನಿರೆನು ಲಯ ಕರ್ತನಾ ನಾಟ್ಯ
ಮುಂದೆ ಕೆಳುವುದೆಲ್ಲ ಪ್ರಳಯ ಗಾಥಾ
No comments:
Post a Comment