Sunday, September 25, 2016

ಗುಳು ಗುಳು

ನಂದೇ ಮೂಗು ನಂದೇ ಮೀಸೆ
ನನ್ನೇ ಕಾಡುತ್ತೆ
ಸುಮ್ಮ್ ಮಲಗೋ ಮೀಸೆ ಅಂದ್ರೆ
ಮೂಗಲ್  ತೂರತ್ತೆ

ಬೇಡ ಕೆಣಕ್ ಬೇಡ
ಕತ್ತರ್ಸ್ ಬಿಡ್ತೀನಿ
ನಲ್ಲಿ ಕೆಳಗ್ ನೀರಲ್ ಬಿಟ್ಟು
ಮುಳಗಸ್ ಬಿಡ್ತೀನಿ

ಏನು ಏನಂದೇ
ನಾಳೆ ಶುಕ್ರವಾರನ
ಮನೇಗ್ ಲಕ್ಸ್ಮಿ ಬರ್ತಾಳೆ
ಸಲೂನ್ ಬೀಗಾನಾ

ಲಕ್ಷಣ ಅವಲಕ್ಷಣ
ನನಗ್ ಮಾತ್ರಾನಾ
ನೆಟ್ಟಗ್ ಬೆಳಿಯೋದ್ ಬಿಟ್ಟು
ಗುಂಗುರು ಸರೀನಾ

ನೆಪ ಏನೇ ಇರ್ಲಿ
ಬುದ್ದಿ ಕಲಸ್ತೀನಿ
ಕೌಟಿಲ್ಯನ್ ಕೋಪ ನಂದು
ಬುಡ ಕಿತ್ತಾಕ್ತೀನಿ

ಮತ್ತೆ ಹುಟ್ಟ್  ಬಂದ್ರೂ
ನೆನಪ್ ಇರತ್ತೆ
ಸಿಂಹದ್ ಜೊತೆ ಸರಸ
ನನ್ ಮೂಗನ್ ಮುಟ್ಟದ್ರೆ

ನಿನ್ ಅಕ್ಕ್ ಪಕ್ಕದೌರ್ಗೂ ಗೊತ್ತಿರ್ಲಿ
ನನ್ ಕೆಂಡ ತುಂಬಿದ್ ರೋಷ
ಏನ್ ಅಂದ್ಕೊಂಡ್  ಬಿಟ್ಟಿ
ನಂದು ರಾಮಾಚಾರೀ ವಂಶ