ಸ್ವರ್ಗದ ದಾಹವು ಧರೆಯ ನುಂಗುತಲಿಹುದು,
ನನ್ನೊಡೆಯ ನಿನ್ನೊಡೆಯನಿಗಿನ್ತಲು ಹೆಚ್ಚು.
ನಾ ನಂಬಿದ ದೇವ, ನನಗಿತ್ತ ಕಿವಿ ಮಾತು,
ನೆತ್ತರಿನ ಹೊಳೆದಾಟಿ ದಡಸೇರೆ ಸ್ವರ್ಗ.
ಧರ್ಮವನು ರಕ್ಷಿಸಿದೆ, ಧರ್ಮವೇ ರಕ್ಷಿಪುದು,
ನನಗಿಲ್ಲ ಖರ್ಮದ ಪ್ರತಿಫಲದ ಚಿಂತೆ.
ನೀನಿರಲು ನಿನ್ನೋಡೆಯ, ಇರಲಿಕ್ಕೆ ಯಾರಿಹನು?
ಯನ್ನಿಹಪರದ ಅದಿಪತಿಯ, ಆಪ್ತ ನಾನಾಗ.
ರಣಹೊಮದಾಹುತಿಗೆ ಸತ್ತಾಯ್ತು ಪರಧರ್ಮ,
ಸ್ವರ್ಗವೆಕೋ ಇನ್ನು ಕಾಣುವಂತಿಲ್ಲ.
ಮತಿಗೆಟ್ಟಿ, ಮಿತಿಮೀರಿ, ಮಾಡಿರುವ ದುಷ್ಖರ್ಮ,
ಬೆಮ್ಬಿಡುವುದೇ? ಸರಿಯೇ? ನಾನರಿತ ಧರ್ಮ?