ಈ ಕವನ ನಾನು ಡಿಗ್ರಿ ಕಾಲೆಜಿನಲ್ಲಿದ್ದಾಗ ಬರದಿದ್ದು . ಅಂದ್ರೆ ಸುಮಾರು ೪ ವರ್ಷಗಳಹಿಂದೆ. ಯಾರಮೇಲೆ ಈ ಕವನ ಬರ್ದಿದ್ದ್ನೋ ಆತಾ ಈಗ ಈ ಹಂತಕ್ಕೆ ಬಂದಿದ್ದಾನೆ, ಜೀವನದಲ್ಲಿ. ಹಾಸ್ಯ ಕವನಹೋಗಿ ಭವಿಷ್ಯ ವಾಣಿ ಹೇಗಾಯ್ತು ಅಂತ ಆಶ್ಚರ್ಯನಾ? ರವಿ ಕಾಣದನ್ನು ಕವಿ ಕಾಣ್ತಾನೆ, ಹುಷಾರು!!!
ಅರೆಬೋಡನಾ ತಲೆಯ, ಬುರುಡೆಯಾ ಮೇಲಿದ್ದ,
ಬಿಳಿಕೂದಲಾ ಬುಡದ ತುಸು ಮೇಲೆ ಅಡಗಿತ್ತು,
ಮುದಿಯ ಹೇನೊಂದು, ತನ್ನ ಸಂಸಾರದೊಡೆ
ಅಳಿದುಳಿದ ಆಯುವನು ಕಳೆಯುವುದಕೆಂದು.
ಸೀರಿನಾ ಸಾಗರವೆ ಯೇಲೆಲ್ಲು ಹರಡಿತ್ತು,
ಕೂದಲಾ ಯೆಡಬಲಕೆ ಮೇಲೆ ಕೆಳಗಡೆಗೆ,
ಬೊಡನಾ ಒಡತಿಯು ಹಣಗೆಯಾ ಹಿಡತಂದು
ಹಿಕ್ಕತೊಡಗಿದಳು ನೆತ್ತಿಯಾವರೆಗೆ.
ಇದು ಇಂದಿನಾ ಕಥೆಯಲ್ಲ,
ಮದುವೆಯಾ ಮುಂಚಿಂದ ಜುಟ್ಟವಳ ಕೈಕೊಟ್ಟ ಮುಠ್ಟಾಳನಾ ವ್ಯಥೆಯು
ಸೊಂಪಾದ ತಲೆಯೊಂದು ಬರಡು ಬಂಜರವಾಯ್ತು,
ಅಂದಿದ್ದ ಮುದಿಹೇನು ಇಂದೂ ಬದುಕಿಹುದು.