Sunday, May 31, 2009

ಶಾವಿಗೆ ಬಾತ್

ಶಾವಿಗೆ ಬಾತ್,

ಯೇಸ್ ಬಾರಿ ಮಾಡಿದ್ರೂ, ಫಿರ್ಸೆ ವೋಹೀ ಬಾತ್

ಶಾವಿಗೆ ಬಾತ್.

ಮಾಡೋ ಮುಂದ ತಲೀ ತುಂಬ MTR ತಿಂಡಿ

ಆದ್ಮೇಲಿನ್ ಅಸ್ಲಿಯತ್, ಧೋಬೀ ಘಾಟಿನ ಗಂಜಿ

ಯೇಸ್ ಬಾರಿ ಮಾಡಿದ್ರೂ, ಫಿರಸೇ ವೋಹೀ ಬಾತ್
ಶಾವಿಗೆ ಬಾತ್.

ಪಾಪಿ ಪೀಟ್ಜಾಗ್ ತಿಳಿವಲ್ತು, ಇದು ಹೊಟ್ಟೀ, ಫ್ರಿಡ್ಜ್ ಅಲ್ಲ,

ಹೋದ್ ವಾರ ತಿಂದಿದ್ದು, ಕರಗೋ ಸದ್ದೇ ಇಲ್ಲ.

ಬಸರಾದಂಗ್ ಆಗೈತಿ ಈ ಬ್ರ್ಹ್ಮಚ್ಚಾರೀ ಹೊಟ್ಟೀ,

ಪಾರ ಮಾಡೋ ಶಾವಿಗೆ ಅಂದ್ರ, ನೀನೂ ಕೈ ಹೊಟ್ಟೀ.

ಯೇಸ್ ಬಾರಿ ಮಾಡಿದ್ರೂ, ಫಿರಸೇ ವೋಹೀ ಬಾತ್

ಶಾವಿಗೆ ಬಾತ್.

Monday, March 23, 2009

Boda

ಈ ಕವನ ನಾನು ಡಿಗ್ರಿ ಕಾಲೆಜಿನಲ್ಲಿದ್ದಾಗ ಬರದಿದ್ದು . ಅಂದ್ರೆ ಸುಮಾರು ೪ ವರ್ಷಗಳಹಿಂದೆ. ಯಾರಮೇಲೆ ಈ ಕವನ ಬರ್ದಿದ್ದ್ನೋ ಆತಾ ಈಗ ಈ ಹಂತಕ್ಕೆ ಬಂದಿದ್ದಾನೆ, ಜೀವನದಲ್ಲಿ. ಹಾಸ್ಯ ಕವನಹೋಗಿ ಭವಿಷ್ಯ ವಾಣಿ ಹೇಗಾಯ್ತು ಅಂತ ಆಶ್ಚರ್ಯನಾ? ರವಿ ಕಾಣದನ್ನು ಕವಿ ಕಾಣ್ತಾನೆ, ಹುಷಾರು!!!

ಅರೆಬೋಡನಾ ತಲೆಯ, ಬುರುಡೆಯಾ ಮೇಲಿದ್ದ,
ಬಿಳಿಕೂದಲಾ ಬುಡದ ತುಸು ಮೇಲೆ ಅಡಗಿತ್ತು,
ಮುದಿಯ ಹೇನೊಂದು, ತನ್ನ ಸಂಸಾರದೊಡೆ
ಅಳಿದುಳಿದ ಆಯುವನು ಕಳೆಯುವುದಕೆಂದು.

ಸೀರಿನಾ ಸಾಗರವೆ ಯೇಲೆಲ್ಲು ಹರಡಿತ್ತು,
ಕೂದಲಾ ಯೆಡಬಲಕೆ ಮೇಲೆ ಕೆಳಗಡೆಗೆ,
ಬೊಡನಾ ಒಡತಿಯು ಹಣಗೆಯಾ ಹಿಡತಂದು
ಹಿಕ್ಕತೊಡಗಿದಳು ನೆತ್ತಿಯಾವರೆಗೆ.

ಇದು ಇಂದಿನಾ ಕಥೆಯಲ್ಲ,
ಮದುವೆಯಾ ಮುಂಚಿಂದ ಜುಟ್ಟವಳ ಕೈಕೊಟ್ಟ ಮುಠ್ಟಾಳನಾ ವ್ಯಥೆಯು
ಸೊಂಪಾದ ತಲೆಯೊಂದು ಬರಡು ಬಂಜರವಾಯ್ತು,
ಅಂದಿದ್ದ ಮುದಿಹೇನು ಇಂದೂ ಬದುಕಿಹುದು.

Sunday, January 25, 2009

Gondala

ಬಹಳ ದಿನಗಳ ನಂತರ ಮತ್ತೆ ಬರಿಯೋ ಸ್ಪೂರ್ತಿ ಬಂದಿದೆ. ಒಂದು ಸಿನಿಮಾ ಹಾಡು ಕೇಳಿ ಸುಪ್ತ ಭಾವನೆಗಳು ಮತ್ತೆ ಜಾಗ್ರಿತಗೊಂಡಿವೆ. ಬಹಳ ಗೊಂದಲದ ಸ್ಥಿಥಿಯಲ್ಲಿದ್ದೀನಿ. ಹೌದು ನನ್ನಂಥಾ ನೂರಾರು ಜನ ಇಲ್ಲಿದ್ದಾರೆ. ಯಾವುದೊ ಅವಕಾಶ ಹುಡುಕಿಬಂದು ಇಲ್ಲೂ ಇಲ್ಲ ಅಲ್ಲೂ ಇಲ್ಲ ಯಂಬ ಅತಂತ್ರ ಸ್ಥಿತಿ. ನೋಡಿ, ಮಾತಿನಲ್ಲೇ ಹೇಗೆ ಗೊಂದಲ ಎದ್ದು ತೋರುತ್ತಿದೆ. ವೊಂದೆಡೆಏನಾದರೂ ಸದಿಸುವ ಛಲ, ಇನ್ನೊಂದೆಡೆ ಸಾಧನೆಗೆ ಕಟ್ಟುತ್ತಿರುವ ಬೆಲೆಯ ಕೊರಗು. ಪ್ರತೀದಿನ ನನ್ನೊಂದಿಗೇ ನನ್ನ ಸಮರ . ಕನ್ನಡಿಯ ಪ್ರತಿಭಿಂಬ, ಅದರ ಹಿಂದಿನ ಚರಿತ್ರೆ, ಅದರ ಮುಂದೆ ಇರಬಹುದಾದಂತ ಭವಿಷ್ಯ, ಎದೆಯ ಗುಂಡಿಗೆ ನಡಗಿಸುತ್ತಿದೆ. ಋಣವಿರುವ ಕರ್ತವ್ಯಗಳನ್ನು ಹೇಗೆ ಕರ್ಯಗತಗೊಳಿಸುತ್ತೇನೋ ಎಂಬ ಚಿಂತೆ. ಲಗಾಮನ್ನು ದೇವನವಶಪಡಿಸಿದ್ದೇನೆ. ಡಿವಿಜಿ ಹೇಳಿದಂತೆ, ಮದುವೆಗೋ ಮಸಣಕೋ, ಬೇಕೆಂದಕಡೆಗೋಡು...